ಕೊನೆಯದಾಗಿ ಮಾರ್ಪಡಿಸಿದ ದಿನಾಂಕ: 01 ಜನವರಿ 2021
Chrome ಅಥವಾ Chrome OS ಅನ್ನು ಬಳಸುವ ಮೂಲಕ, https://policies.google.com/terms ನಲ್ಲಿನ Google ಸೇವಾ ನಿಯಮಗಳು ಮತ್ತು ಈ Google Chrome ಮತ್ತು Chrome OS ನ ಹಚ್ಚುವರಿ ಸೇವಾ ನಿಯಮಗಳಿಗೆ ನೀವು ಸಮ್ಮತಿಸುತ್ತೀರಿ.
ಈ Google Chrome ಮತ್ತು Chrome OS ನ ಹೆಚ್ಚುವರಿ ಸೇವಾ ನಿಯಮಗಳು, Chrome ಮತ್ತು Chrome OS ನ ಕಾರ್ಯಗತಗೊಳಿಸಬಹುದಾದ ಕೋಡ್ ಆವೃತ್ತಿಗೆ ಅನ್ವಯಿಸುತ್ತವೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಪರವಾನಗಿ ಒಪ್ಪಂದಗಳ ಅಡಿಯಲ್ಲಿ, Chrome ನ ಬಹುಪಾಲು ಮೂಲ ಕೋಡ್ ಅನ್ನು https://code.google.com/chromium/terms.html ನಲ್ಲಿ ಉಚಿತವಾಗಿ ಪಡೆಯಬಹುದು.
Chrome ಮತ್ತು Chrome OS ನ ಕೆಲವು ಘಟಕಗಳ ನಿಮ್ಮ ಬಳಕೆಯು ಈ ಕೆಳಗಿನ ನಿಯಮಗಳಿಗೆ ಒಳಪಟ್ಟಿರುತ್ತದೆ:
AVC
ಈ ಉತ್ಪನ್ನವು ಈ ಮುಂದಿನ ಕಾರ್ಯಗಳಿಗಾಗಿ ಸಂಭಾವನೆಯನ್ನು ಪಡೆಯದ ಗ್ರಾಹಕರ ವೈಯುಕ್ತಿಕ ಅಥವಾ ಇತರ ಬಳಕೆಗಾಗಿ AVC ಪೇಟೆಂಟ್ ಪೋರ್ಟ್‌ಫೋಲಿಯೊ ಪರವಾನಗಿಯ ಅಡಿಯಲ್ಲಿ ಪರವಾನಗಿ ಪಡೆದಿದೆ (i) AVC ಪ್ರಮಾಣ ("AVC ವೀಡಿಯೊ") ದೊಂದಿಗೆ ಅನುಗುಣವಾಗಿ ವೀಡಿಯೊ ಎನ್‌ಕೋಡ್ ಮಾಡಲು ಮತ್ತು/ಅಥವಾ (ii)ವೈಯಕ್ತಿಕ ಚಟುವಟಿಕೆಯೊಂದರಲ್ಲಿ ತೊಡಗಿಕೊಂಡಿರುವ ಗ್ರಾಹಕರೊಬ್ಬರು ಎನ್‌ಕೋಡ್ ಮಾಡಿದ ಮತ್ತು/ಅಥವಾ AVC ವೀಡಿಯೊವನ್ನು ಒದಗಿಸಲು ಪರವಾನಗಿ ಪಡೆದ ವೀಡಿಯೊ ಪೂರೈಕೆದಾರರಿಂದ ಪಡೆದ AVC ವೀಡಿಯೊವನ್ನು ಡಿಕೋಡ್ ಮಾಡಲು. ಯಾವುದೇ ಇತರ ಬಳಕೆಗಾಗಿ ಯಾವುದೇ ಪರವಾನಗಿಯನ್ನು ನೀಡಲಾಗುವುದಿಲ್ಲ ಅಥವಾ ಪರೋಕ್ಷವಾಗಿ ಸೂಚಿಸಲಾಗುವುದಿಲ್ಲ. ಹೆಚ್ಚುವರಿ ಮಾಹಿತಿಯನ್ನು MPEG LA, L.L.C. ನಿಂದ ಪಡೆದುಕೊಳ್ಳಬಹುದು. HTTP://WWW.MPEGLA.COM ಅನ್ನು ನೋಡಿ.
ಹೆಚ್ಚುವರಿಯಾಗಿ, Chrome OS ನ ಕೆಲವು ಘಟಕಗಳ ಕುರಿತ ನಿಮ್ಮ ಬಳಕೆಯು ಈ ಕೆಳಗಿನ ನಿಯಮಗಳಿಗೆ ಒಳಪಟ್ಟಿರುತ್ತವೆ:
MPEG-4
ಈ ಉತ್ಪನ್ನವು ಈ ಮುಂದಿನ ಕಾರಣಗಳಿಗಾಗಿ ಗ್ರಾಹಕರ ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗಾಗಿ MPEG-4 ವಿಷುವಲ್ ಪೇಟೆಂಟ್ ಪೋರ್ಟ್‌ಫೋಲಿಯೊ ಪರವಾನಗಿ ಅಡಿಯಲ್ಲಿ ಪರವಾನಗಿ ಪಡೆದಿದೆ (i) MPEG-4 ದೃಶ್ಯ ಮಾನದಂಡಕ್ಕೆ ಅನುಗುಣವಾಗಿ ವೀಡಿಯೊವನ್ನು ಎನ್‌ಕೋಡ್ ಮಾಡಲು ("MPEG-4 ವೀಡಿಯೊ") ಮತ್ತು ಅಥವಾ (ii) ವೈಯಕ್ತಿಕ ಮತ್ತು ವಾಣಿಜ್ಯೇತರ ಚಟುವಟಿಕೆಯೊಂದರಲ್ಲಿ ತೊಡಗಿಕೊಂಡಿರುವ ಗ್ರಾಹಕರೊಬ್ಬರು ಎನ್‌ಕೋಡ್ ಮಾಡಿದ ಮತ್ತು/ಅಥವಾ MPEG-4 ವಿಡಿಯೋವನ್ನು ಒದಗಿಸಲು MPEG LA ಪರವಾನಗಿ ಪಡೆದ ವೀಡಿಯೊ ಪೂರೈಕೆದಾರರಿಂದ ಪಡೆದ MPEG-4 ವೀಡಿಯೊವನ್ನು ಡಿಕೋಡ್ ಮಾಡಲು. ಯಾವುದೇ ಇತರ ಬಳಕೆಗಾಗಿ ಯಾವುದೇ ಪರವಾನಗಿಯನ್ನು ನೀಡಲಾಗುವುದಿಲ್ಲ ಅಥವಾ ಪರೋಕ್ಷವಾಗಿ ಸೂಚಿಸಲಾಗುವುದಿಲ್ಲ. ಪ್ರಚಾರ, ಆಂತರಿಕ ಮತ್ತು ವಾಣಿಜ್ಯ ಬಳಕೆಗಳು ಮತ್ತು ಪರವಾನಗಿಗಳ ಕುರಿತು ಹೆಚ್ಚಿನ ಮಾಹಿತಿಯನ್ನು MPEG LA, LLC ನಿಂದ ಪಡೆಯಬಹುದು. HTTP://WWW.MPEGLA.COM ಅನ್ನು ನೋಡಿ.